ಇತಿಹಾಸ ಸಂಶೋಧನೆ
ಚಿತ್ರದುರ್ಗದ ಬಖೈರು
[ಸಂಗ್ರಹಿಸಿದವರು - ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರು, ಕ್ಯೂರೇಟರ್, ಪ್ರಾಚ್ಯ ಸಂಶೋಧನ ಮ್ಯೂಸಿಯಮ್, ಚಿತ್ರದುರ್ಗ]
ಲೇಖಾoಕ – ೧
ಮಹಾರಾಷ್ಟ್ರರು ಅಭ್ಯುದಯವನ್ನು ಹೊಂದಿದ್ದ ಕಾಲದಲ್ಲಿ ತಮ್ಮ ಪಕ್ಷದ ರಾಯಭಾರಿಗಳನ್ನು ನಾನಾ ಅರಸುಗಳ ಆಸ್ಥಾನದಲ್ಲಿ ಇರಿಸಿದರು. ಹಾಗೆ ನಿಯಮಿತವಾದ ರಾಯಭಾರಿಗಳು ಆಯಾ ರಾಜ್ಯದ ರಾಜಕೀಯ ಸ್ಥಿತಿಯನ್ನು ಕುರಿತು ಪೇಷ್ವೆಯವರಿಗೆ ದೀರ್ಘವಾದ ರಾಜಕೀಯ ಪತ್ರಗಳನ್ನು ಬರೆಯುತ್ತಿದ್ದರು, ಈ ಪತ್ರಗಳಿಗೆ "ಬಖೈರು" ಎಂದು ಹೆಸರು ರೂಢವಾಗಿದೆ. ಇಂತಹ ಬಖೈರುಗಳನ್ನು ಚಿತ್ರದುರ್ಗದ ಪ್ರಸಿದ್ಧ ಸಂಶೋಧಕರಾದ ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರು ಸಂಗ್ರಹಿಸಿದ್ದು ವಾಚಕರಿ ಪರಿಚಯ ಮಾಡಿಕೊಡಲು ಉದ್ದೇಶಿಸಿದ್ದಾರೆ. ಪೂನಾ ಪೇಶ್ವೆ ಶ್ರೀಮಂತ ಮಾಧವರಾಯನ ಕಾಲದ ಪತ್ರವ್ಯವಹಾರವನ್ನಿಲ್ಲಿ ಮಾಡಲಾಗಿದೆ.
ಮದಕರಿನಾಯಕನಿಗೆ ಹೈದರಾಲಿಯ ಪತ್ರ
ಪೂನಾ ಪೇಷ್ವೆಗೆ ಮರಾಠಿ ರಾಯಭಾರಿ ವಿವರಣೆ
ಮಹಾರಾಜೇಶ್ರೀ ಮಾಧವರಾವ್ಪಂತ್ (ಪೂನಾ ಪೆಶ್ವೆ, ಜನನ ೧೮ - ೪ - ೧೭೭೪, ಮರಣ ೨೭ - ೧೦ - ೧೭೯೫; ಆಗರ್ಭ ಶ್ರೀಮಂತ ಛತ್ರಪತಿಯು ಈ ಮಗುವಿನ ೪೦ನೇ ದಿನವೇ ಪೇಶ್ವೆಯ ಅಧಿಕಾರವನ್ನು ಕೊಟ್ಟನು)...........